ಪ್ರಣತಿ ಮತಿ ಪ್ಲುತವಾಗಿ,
ಮಂದಸ್ಮಿತ ಶತವಾಗಿ
ನಕ್ಕು ನಲಿ ಘಟವಾಗಿ
ತೆರೆ ಎದ್ದು ರತ ವಾಗಿ
ಲಲಿತವದು ಕಲೆ ಕಟ್ಟಿತೋ ಕಾಣ
ನಾಂಧಿ ನಾನಾಯಿತೋ ಜಾಣ
ಛಾಯೆ ಹೆಸರಾಗಿ
ಚಿತ್ರ ಹಸಿರಾಗಿ
ಶಬ್ದಾರ್ಥ ರಥವಾಗಿ
ವಾಕ್ ಭಾವ ದ್ಯುತವಾಗಿ
ಸಂಭಾಷೆ ನೆತ್ತಿತೋ ಕಾಣ,
ನಾಂಧಿ ನಾನಾಯಿತೋ ಜಾಣ
ಪ್ರತಿಮೆಗಳ ಪಳಗಿಸುತ
ಆಹತವ ಮೊಳಗಿಸುತ
ಅಭಿದಾನ ಗಿಟ್ಟಿಸುತ
'ಸೂತ್ರಧಾರ' ತಾ ಕರಗೆ
ಸೂತ್ರ ಕೈ ತಪ್ಪೀತೋ ಕಾಣ
ನಾಂಧಿ ನಾನಾಯಿತೋ ಜಾಣ
ನಾಂಧಿ ಹುಡುಕಿತು ಹೆಸರ
ತನ್ ಮುಖಕೆ ಕೋರ್ಕೆಸರ
ನೀಡಿ ಬಿಂಬಕೆ ಬಸಿರ
ಭಗ್ನ-ಘಟ, ಹೆಗಲು ತರ
ನಾಟಕ ಅದರಭಿಷ್ಠ ಕಾಣ
ನಾಂಧಿ ನಾನಾಯಿತೋ ಜಾಣ
('ಆರಂಭ' ಹೆಣೆದ ನಾಟಕ ಗೀಳಲ್ಲಿ 'ತಮಟೆ' ಗಳ ಶಬ್ಡದ ನಡುವೆ 'ನಾಂಧಿ' ನಾನಾಯಿತು ) ೦೭-೦೨-೨೦೧೩ , ೩.೦೦ ಮಧ್ಯಾಹ್ನ
ಭಾರತೀಯ ವಿಜ್ಞ್ಯನ ಮಂದಿರ, ನನ್ನ ಮೇಜಿನ ಮೇಲೆ)
No comments:
Post a Comment