ಲತೆ ಹಿಡಿದ ಹನುಮನ ಸಾಕ್ಷಿ ಈ ಸಂವೇದನೆ
ಬೇಂದ್ರೆಯ ಕವಿತೆಗಳ ಭಾವ ಸಖಿಯೇ ನಿನಗಿದು ಆರಾಧನೆ
ಸಖಿ ನೀ ನನ್ನ ಜೀವನದ ಘಟನೆ..
ಮನೆ ನಿಂತರು ನಿಲ್ಲದ ಗಟನೆ
ಘಟ್ಟ ಕಳೆದರೂ ಇಳಿದಿಲ್ಲ...ನಿನ್ನೆ
ಗತ ಕಳೆದರು ಕಳೆದಿಲ್ಲ ಸಂಜ್ಞೆ
ಬಿಡಲಿ ವಿಚಾರಗಳ ಸುಳಿ
ಕಾಲ ಅಂತರದ ಕಳಿ
ನಾನ್ನೀನು ನಾವಾಗೆ ಹುಟ್ಟುವದು ಮುತ್ತುಮಳಿ
ಜ್ಞ್ಯೆಯ ಜ್ನ್ಯಾತಾ ಎರಡೂ ಜೋತೆಸೆರಲಿ
ಕಾಲ ಸರಿಯಲಿ ಸ್ಮ್ರತಿಯ ಸೆರೆಯಲಿ
ಅನ್ಯೋನ್ಯ ಅಂಜನದಿ ಕಪ್ಪೇರಲಿ
ನೊಗ ಕಳೆದು ಸೊಗವಾಗಿ
ಭಾವ ಬಾಂಧಳವಾಗಿ
ಬಾಳ್ತೆರು ಭರ್ಗದಿ ನುಂಪಾಗಲಿ
ವೇದ ಪ್ರಮಾಣವನೆ ಕಾಲದ ಕ್ಷೇಪವೇಕೆ
ಕಾಣದ ಆಕ್ಷೆಪವೆಕೆ
ದ್ಯುತಿಯ ವ್ರತ್ತಕೆ ಕೊನೆಯದು ಇರದಿರಲ್ಕೆ
ನಮ ನಡುವೆ ಅಂಟಿದ ನಂಟಿಗೆ ಅಂತ್ಯವೇಕೆ
No comments:
Post a Comment